🌱 Soil4Kids
main

ಸತ್ತಿದ್ದು ಹೊಲಸಲ್ಲ: ಜೀವಂತ ಮಣ್ಣಿನ ಮೇಲೆ ಭೂಬಳಕೆಯ ಪರಿಣಾಮಗಳು

📅 2026-02-16 ಕನ್ನಡ

ಸತ್ತಿದ್ದು ಹೊಲಸಲ್ಲ: ಜೀವಂತ ಮಣ್ಣಿನ ಮೇಲೆ ಭೂಬಳಕೆಯ ಪರಿಣಾಮಗಳು

Jes Hines 1,2, Franciska de Vries3*

1 German Centre for Integrative Biodiversity Research (iDiv) Jena-Halle-Leipzig, Leipzig, Germany2 *Institute of Biology, Leipzig Universität, Leipzig, Germany; 3 *

Institute for Biodiversity and Ecosystem Dynamics, University of Amsterdam, Amsterdam, Netherlands

ನಾವು ಮನುಷ್ಯರು ಭೂಮಿಯನ್ನು ಉಳುಮೆ ಮಾಡಿ ಆಹಾರ ಮತ್ತು ಇತರ ಬೆಳೆಗಳನ್ನು ಬೆಳೆದುಕೊಳ್ಳುತ್ತೇವೆ. ನಮ್ಮ ಉಳುಮೆಯ ವಿಧಾನವು ನಮ್ಮ ಮಣ್ಣಿನಲ್ಲಿರುವ ಜೀವಿಗಳ ಮೇಲೆ ಪರಿಣಾಮವನ್ನು ಮಾಡಬಹುದು. ಭೂಮಿಯೊಳಗಿನ ಈ ಜೀವಿಗಳು ಮಣ್ಣಿನೊಳಗೆ ಇರುವ ಸಾವಯವ ವಸ್ತುಗಳನ್ನು ಕೊಳೆಸುವ ಮತ್ತು ಪೌಷ್ಟಿಕತೆಯನ್ನು ಗಿಡಗಳಿಗೆ ಉಣ್ಣಿಸುವ ಕೆಲಸವನ್ನು ಮಾಡುತ್ತಿರುತ್ತವೆ. ನಾವು ಮಣ್ಣಿಗೆ ಹೆಚ್ಚೆಚ್ಚು ರಸಗೊಬ್ಬರಗಳನ್ನು ಮತ್ತು ಕಳೆನಾಶಕಗಳನ್ನು ಸೇರಿಸಿ ಸಣ್ಣ ಜಾಗದಲ್ಲಿಯೇ ಹೆಚ್ಚೆಚ್ಚು ಬೆಳೆ ಬೆಳೆಯಬಹುದು. ಆದರೆ ಹಾಗೆ ರಾಸಾಯನಿಕಗಳನ್ನು ಹಾಕಿದಾಗ ಮಣ್ಣಿನಲ್ಲಿರುವ ಈ ಜೀವಿಗಳಿಗೆ ತೊಂದರೆಯುಂಟಾಗುತ್ತದೆ. ಹೀಗೆ ರಾಸಾಯನಿಕಗಳನ್ನು ಹಾಕಿ ಹೆಚ್ಚು ಬೆಳೆಯನ್ನು ತೆಗೆಯುವ ಬದಲಿಗೆ ಮಣ್ಣಿನೊಳಗಿನ ಜೀವಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಬೆಳೆಗಳನ್ನು ಬೆಳೆಯಬಹುದು. ಆದರೆ ಅದಕ್ಕೆ ಹೆಚ್ಚು ಜಾಗ ಬೇಕಾಗುತ್ತದೆ. ಭೂಮಿಯ ಮೇಲಿನ ಎಲ್ಲಾ ಜೀವಿಗಳಿಗೂ ಆಹಾರ ಬೇಕು. ಆಹಾರ ಬೆಳೆಯುವ ಇಷ್ಟೇ ಭೂಮಿಯನ್ನು ಜಗತ್ತಿನಲ್ಲಿರುವ ನಾವೆಲ್ಲರೂ ಹಂಚಿಕೊಂಡಿದ್ದೇವೆ. ಕಾರಣ, ಕೃಷಿಯು ಮಣ್ಣಿನೊಳಗಿನ ಜೀವಿಗಳ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದನ್ನೂ ತಿಳಿಸುಕೊಳ್ಳುವುದು ಉತ್ತಮವಲ್ಲವೇ?

ಜಗತ್ತಿನಲ್ಲಿ ೭.೮ ಬಿಲಿಯನ್ ಅಂದರೆ ಏಳುನೂರಾ ಎಂಬತ್ತು ಕೋಟಿ ಜನರು ಮಣ್ಣಿನ ಮೇಲೆ ಬೆಳೆಯುವ ಆಹಾರವನ್ನು ತಿನ್ನುತ್ತಾರೆ

ಈ ಭೂಮಿಯ ಮೇಲೆ ೭.೮ ಶತಕೋಟಿ ಜನರಿದ್ದಾರೆ. ಎಲ್ಲರಿಗೂ ಆರೋಗ್ಯಕರ ಆಹಾರ ಬೇಕು. ತರಕಾರಿಗಳು ಮತ್ತು ಇತರ ಬೆಳೆಗಳು ಸೇರಿದಾಗಲೇ ಆರೋಗ್ಯಕರ ಆಹಾರ ಆಗುತ್ತದೆ. ಆದರೆ ಇಷ್ಟೊಂದು ಜನಕ್ಕೆ ಆಹಾರವನ್ನು ಉತ್ಪಾದಿಸುವುದು ಪರಿಸರಕ್ಕೆ ಮಾರಕವಾಗುತ್ತಿದೆ. ಮೊದಲನೆಯದಾಗಿ ನಮಗೆ ಆಹಾರ ಬೆಳೆಯಲು ಸಾಕಷ್ಟು ಭೂಮಿ ಬೇಕು, ಹಾಗೆಯೇ ನಮ್ಮ ಪರಿಸರಕ್ಕೆ ಹಾನಿ ಮಾಡದ ರೀತಿಯಲ್ಲಿ ನಮ್ಮ ಕೃಷಿ ಪದ್ಧತಿ ಇರಬೇಕು.

ಮಣ್ಣಿನೊಳಗೆ ಬ್ಯಾಕ್ಟೀರಿಯಾ, ಫಂಗಸ್, ಮಣ್ಣುಹುಳಗಳು, ಇನ್ನೂ ಅನೇಕ ಜಾತಿಯ ಶತಕೋಟಿಗಟ್ಟಲೆ ಜೀವಿಗಳು ಮಣ್ಣಿನೊಳಗೆ ಇವೆ. ಇವೆಲ್ಲವೂ ಮಣ್ಣಿನೊಳಗೆಯೇ ನಮ್ಮಂತೆಯೇ ಉಸಿರಾಡುತ್ತವೆ, ತಿನ್ನುತ್ತವೆ, ಬೆಳೆಯುತ್ತವೆ, ಆಮ್ಲಜನಕವನ್ನು ಕುಡಿದು ಇಂಗಾಲದ ಡೈಆಕ್ಸೈಡ್ ನ್ನು ಹೊರಹಾಕುತ್ತವೆ. ಮಣ್ಣಿನೊಳಗಿರುವಜೀವಿಗಳುತಮ್ಮ ಜೀವಿತ ಕಾಲದಲ್ಲಿ ಸಸ್ಯಗಳ ಬೆಳವಣಿಗೆಗೆ ಬೇಕಾಗುವ ಅನೇಕ ಪೋಷಕಾಂಶಗಳನ್ನು ಬಿಡುಗಡೆ ಮಾಡುತ್ತಿರುತ್ತವೆ. (ಮೊದಲ ಚಿತ್ರ) ಹಾಗೆಯೇ ಸತ್ತ ಜೀವಿಗಳ ಸಾವಯವ ಅಂಶಗಳನ್ನು ಮಣ್ಣಿನಲ್ಲಿ ಸೇರಿಸುತ್ತ ಇರುತ್ತವೆ. ಅವು ಮಣ್ಣಿನ ಸಂರಚನೆ ಚೆನ್ನಾಗಿ ಆಗುವಂತೆ, ಹಾಗೆ ಮಾಡುವುದರಿಂದ ಸಸ್ಯಗಳಿಗೆ ಬೇಕಾದಷ್ಟು ನೀರು ಸಿಗುವಂತೆ ಮಾಡುತ್ತವೆ. ಹೀಗೆ ಮಣ್ಣಿನೊಳಗಿನ ಜೀವಿಗಳು ನಾವು ಬೆಳೆಯುವ ಬೆಳೆಗಳು ಚೆನ್ನಾಗಿ ಬೆಳೆಯುವಂತೆ ಮಾಡಿ, ಫಲ ನೀಡುವಂತೆ ಮಾಡುತ್ತವೆ, ಆ ಆಹಾರವನ್ನು ನಾವು ತಿನ್ನುತ್ತೇವೆ. ಈ ರೀತಿಯಾಗಿ ನೀರನ್ನು ಸೋಸುತ್ತ, ಪೋಷಕಾಂಶಗಳ ಮರುಪೂರಣ ಮಾಡುತ್ತ ಮನುಷ್ಯರು ಆರೋಗ್ಯಕರವಾಗಿ ಜೀವಿಸಿರುವಂತೆ ಮಾಡಲು ಮಣ್ಣು ಪರಿಸರ****ಸೇವೆಯನ್ನು ಮಾಡುತ್ತಿದೆ.

ನಮ್ಮ ಪದತಲದಲ್ಲೊಂದು ಆಹಾರ ಚಕ್ರ

ಮಣ್ಣಿನೊಳಗಿನ ಜೀವಿಗಳು ಒಬ್ಬೊಬ್ಬರೇ ಅಂದರೆ ಏಕಾಂಗಿಯಾಗಿ ಕೆಲಸ ಮಾಡುವುದಿಲ್ಲ. ಅವು ಮಣ್ಣಿನಆಹಾರಚಕ್ರವೆಂಬ ಬಲೆಯೊಳಗೆ ಒಂದಕ್ಕೊಂದು ಹೆಣೆದುಕೊಂಡಿವೆ. ಒಂದು ಜಾತಿಯ ಜೀವಿಯ ಸಂಖ್ಯೆಯಲ್ಲಿ ಏರುಪೇರಾಯಿತೆಂದರೆ ಅದನ್ನು ಅವಲಂಬಿಸಿದ (ಅದನ್ನು ತಿಂದು ಬದುಕುವ ಮತ್ತು ಅದು ತಿನ್ನುತ್ತಿದ್ದ) ಜೀವಿಗಳ ಸಂಖ್ಯೆಯಲ್ಲೂ ಏರುಪೇರಾಗುತ್ತದೆ. ಈ ಕ್ರಿಯೆ ಪ್ರತಿಕ್ರಿಯೆಗಳನ್ನು ʻಶಕ್ತಿ ಸಂಚಯನʼ ಎಂದು ಕರೆಯುತ್ತಾರೆ. ಮಣ್ಣಿನ ಆಹಾರ ಸರಪಣಿಯಲ್ಲಿ ಮೂರು ಶಕ್ತಿ ಕಾಲುವೆಗಳಿವೆ. ಬ್ಯಾಕ್ಟೀರಿಯಾ ಮತ್ತು ಫಂಗಸ್ ಗಳು ನೆಲದ ಮೇಲೆ ಬಿದ್ದ ಎಲೆಗಳು ಮತ್ತು ಸತ್ತ ಬೇರುಗಳನ್ನು ತಿನ್ನುತ್ತವೆ. ಬ್ಯಾಕ್ಟೀರಿಯಾ, ಫಂಗಸ್ನ್ನು ಬೇರೆ ಜೀವಿಗಳು ತಿಂದು ಹಾಕುತ್ತವೆ. ಜೀವಂತ ಬೇರುಗಳನ್ನೇ ತಿಂದು ಹಾಕುವ ಬೇರು ಹುಳದಂಥ ಜೀವಿಗಳೂ ಇವೆ. ಈ ಹುಳಗಳನ್ನು ಬೇರೆ ಜೀವಿಗಳು ತಿಂದು ಹಾಕುತ್ತವೆ. ಮನುಷ್ಯ ನೆಲದ ಉಳುಮೆ ಮಾಡಿ, ರಾಸಾಯನಿಕ ಗೊಬ್ಬರಗಳನ್ನು ಮಣ್ಣಿಗೆ ಸೇರಿಸಿದಾಗ ಈ ಶಕ್ತಿ ಸಂಚಯನವನ್ನು ಮುರಿದಾಗ, ಅಥವಾ ಕತ್ತರಿಸಿದಾಗ, ಮಣ್ಣಿನೊಳಗಿನ ಆಹಾರ ಚಕ್ರಕ್ಕೆ ತಾನು ಕೊಡುತ್ತಿದ್ದ ಸೇವೆಯನ್ನು ಕೊಡಲಾಗುವುದಿಲ್ಲ. ಆದರೆ ಮನುಷ್ಯ ಹೀಗೆ ಮಾಡುತ್ತಾನೆ. ಮನುಷ್ಯನ ಈ ಕ್ರಿಯೆಯಿಂದ ಎಷ್ಟು ಜಾತಿಯ ಜೀವಿಗಳಿಗೆ ಬಾಧೆಯಾಗುತ್ತದೆ, ಮಣ್ಣಿನ ಜೀವಿಗಳು ಸಾಮಾನ್ಯವಾಗಿ ಮಾಡುವ ಕೆಲಸಕ್ಕೆ ಎಷ್ಟು ಪ್ರಮಾಣದಲ್ಲಿ ಧಕ್ಕೆಯಾಗುತ್ತದೆ ?

ಮಣ್ಣಿನ ಆಹಾರ ಚಕ್ರದ ಮೇಲೆ ಭೂಬಳಕೆಯಿಂದ ಆಗುವ ಪರಿಣಾಮಗಳ ಕುರಿತು ಒಂದು ಪ್ರಯೋಗ

ಬೇರೆ ಬೇರೆ ರೀತಿಯ ಭೂಬಳಕೆಯ ವಿಧಾನಗಳು ಮಣ್ಣಿನ ಆಹಾರ ಚಕ್ರದ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಅವರು ಹೇಳುವ ಪ್ರಕಾರ ಭೂಮಿಯನ್ನು ಆಳವಾಗಿ ಉಳುಮೆ ಮಾಡಿದಾಗ ಅದರೊಳಗಿನ ಜೀವಿಗಳ ಸಂಖ್ಯೆ ಕಡಿಮೆಯಾಗಿ ಮಣ್ಣಿನ ಪರಿಸರ ವ್ಯವಸ್ಥೆಯ ಸೇವೆಗಳು ಕಡಿಮೆಯಾಗುತ್ತವೆ. ರೈತರು ಹುಲ್ಲುಗಾವಲುಗಳನ್ನೂ ಬಳಸಿಕೊಂಡು ಹೆಚ್ಚಿನ ಪ್ರದೇಶದಲ್ಲಿ ಉಳುಮೆಯನ್ನು ವಿಸ್ತರಿಸಿದಾಗ ಮಣ್ಣಿನೊಳಗಿನ ಜೀವಿಗಳ ಸಂಖ್ಯೆ ಹೆಚ್ಚಾಗುತ್ತದೆ ಎನ್ನುವ ವಿಜ್ಞಾನಿಗಳೂ ಇದ್ದಾರೆ. ಇಲ್ಲಿ ಆಳವಾದ ಉಳುಮೆ ಮಾಡದಿರುವುದರಿಂದ ಮತ್ತು ಮಣ್ಣಿನೊಳಗೆ ಹಾಕುವ ಗೊಬ್ಬರದ ಪ್ರಮಾಣ ಕಡಿಮೆಯಿರುವುದರಿಂದ ಅಷ್ಟೇ ಪ್ರಮಾಣದ ಆಹಾರ ಬೆಳೆಯಲು ಹೆಚ್ಚು ಭೂಮಿ ಬೇಕು. ರೈತರು ಆ ಭೂಮಿಯನ್ನು ಉಳುಮೆ ಮಾಡದಿರುವುದರಿಂದ ನೈಸರ್ಗಿಕ ಹುಲ್ಲುಗಾವಲಿನಲ್ಲಿ ಮಣ್ಣಿನೊಳಗಿನ ಜೀವಿಗಳು ಹೆಚ್ಚು ಕೆಲಸ ಮಾಡುತ್ತವೆ ಎಂದು ಆ ವಿಜ್ಞಾನಿಗಳ ನಂಬಿಕೆ. (ಚಿತ್ರ ೧)

ಉಷ್ಣತೆ, ಮಳೆಯ ಪ್ರಮಾಣ, ಮಣ್ಣಿನ ರಚನೆಗಳಿಗನುಸಾರವಾಗಿ ಬೇರೆ ಬೇರೆ ರೀತಿಯ ಹವಾಮಾನ ಪರಿಸ್ಥಿತಿಯಲ್ಲಿರುವ ಮತ್ತು ಬೇರೆ ಬೇರೆ ರೀತಿಯ ಹವಾಮಾನ ಪರಿಸ್ಥಿತಿಯಲ್ಲಿರುವ ಮಣ್ಣಿನ ಅಧ್ಯಯನವನ್ನು ಮಾಡಲಿಕ್ಕಾಗಿ ವಿಜ್ಞಾನಿಗಳು ಯುರೋಪಿನ ಸ್ವೀಡನ್, ಝೆಚಿಯಾ, ಬ್ರಿಟನ್, ಗ್ರೀಸ್ ಗಳನ್ನು ಆರಿಸಿಕೊಂಡು ಪ್ರಯೋಗಕ್ಕೆ ಮೊದಲಿಟ್ಟರು. ಒಂದೊಂದು ದೇಶದಲ್ಲೂ ಮೂರು ಬೇರೆ ಬೇರೆ ರೀತಿಯ ಭೂ****ಬಳಕೆ- ಅತಿಯಾದ ಒಳಸುರಿಗಳನ್ನು ಹಾಕಿದ ಭೂಮಿ, ಸ್ವಲ್ಪ ಪ್ರಮಾಣದಲ್ಲಿ ಒಳಸುರಿಯನ್ನು ಹಾಕಿದ ಭೂಮಿ ಮತ್ತು ನೈಸರ್ಗಿಕವಾದ ಹುಲ್ಲುಗಾವಲುಗಳನ್ನು ಆರಿಸಿಕೊಂಡರು. ಒಂದೊಂದು ಪ್ರಯೋಗ ಭೂಮಿಯಲ್ಲೂ ಇರುವ ಬ್ಯಾಕ್ಟೀರಿಯಾ, ಫಂಗಸ್ (ಬೂಸ್ಟ್), ಏಕಾಣುಜೀವಿಗಳು, ಹುಳಗಳು, ಎರೆಹುಳಗಳು, ಗೆದ್ದಲು, ಇನ್ನೂ ಹತ್ತು ಹಲವು ಜಾತಿಯ ಮಣ್ಣಿನ ಜೀವಿಗಳ- ಪ್ರಮಾಣವನ್ನು ಅಳೆದರು. ಭೂ ಬಳಕೆಯ ವಿಧಾನ ಬೇರೆ ಬೇರೆಯಿದ್ದಾಗ ಆಯಾ ಮಣ್ಣು ಜೀವಿಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನೂ ಅಳದು ನೋಡಿದರು.

ಕೃಷಿಯಲ್ಲಿ ಹೆಚ್ಚಿದ ಒಳಸುರಿ: ಕಡಿಮೆಯಾದ ಜೀವವೈವಿಧ್ಯ

ಭೂಮಿಯ ಬಳಕೆಗೂ ಅದರೊಳಗಿನ ಜೀವಿಗಳು ಮತ್ತವುಗಳ ಸಂಖ್ಯೆಗೂ ನೇರ ಸಂಬಂಧವಿದೆ ಎನ್ನುವುದನ್ನು ವಿಜ್ಞಾನಿಗಳು ಕಂಡುಕೊಂಡರು. ಭೂಮಿಯ ಉಳುಮೆ ಹೆಚ್ಚಾದಂತೆ ಮಣ್ಣಿನೊಳಗಿನ ಒಟ್ಟೂ ಜೀವಿಗಳ ತೂಕವು ಕಡಿಮೆಯಾಗುತ್ತ ಹೋಗುತ್ತದೆ. ಬೇರುಗಳನ್ನು ತಿಂದು ಬದುಕುತ್ತಿದ್ದ ಜೀವಿಗಳ ಸಂಖ್ಯೆಯ ಮೇಲೆ ಮೊದಲ ಪರಿಣಾಮ ಬೀಳುತ್ತದೆ. ಬ್ಯಾಕ್ಟೀರಿಯಾ, ಬೂಷ್ಟುಗಳನ್ನು ತಿಂದು ಬದುಕುವ ಜೀವಿಗಳ ಮೇಲೆ ಆಗುವ ಪರಿಣಾಮ ನಂತರದ್ದು. ಆದರೆ ಬೂಮಿಯನ್ನು ಉಳುಮೆ ಮಾಡಿದ್ದರ ನೇರ ಪರಿಣಾಮ ಎಷ್ಟು ಮತ್ತು ಅದರಿಂದ ಮಣ್ಣಿನ ಆಹಾರ ಚಕ್ರದಲ್ಲಾದ ಬದಲಾವಣೆಯಿಂದ ಆದ ಪರಿಣಾಮ ಎಷ್ಟು?

ಮಣ್ಣಿನೊಳಗಿನ ಜೀವಿಗಳು ನಡೆಸುವ ಕೆಲಸ ಕಾರ್ಯಗಳು

ಮೇಲಿನ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತ ವಿಜ್ಞಾನಿಗಳು ಮಣ್ಣಿನೊಳಗೇ ಇರುವ ಬೇರೆ ಬೇರೆ ಜಾತಿಯ ಜೀವ ಜಂತುಗಳ ಗುಂಪುಗಳು ಮತ್ತು ಅವುಗಳ ಪರಸ್ಪರ ಸಂಬಂಧಗಳು, ಒಂದೊಂದು ಗುಂಪೂ ಯಾವ ಕೆಲಸ ಮಾಡುತ್ತದೆ ಎಂದು ಅಧ್ಯಯನ ಮಾಡಲು ತೊಡಗಿದರು. ಇದರಲ್ಲಿ ಉಸಿರಾಟ ಮತ್ತು ಸಾರಜನಕದ ಪುನರ್ಬಳಕೆಯ ವಿಷಯಗಳನ್ನು ತೆಗೆದುಕೊಂಡು ಅಧ್ಯಯನ ಆರಂಭಿಸಿದರು. ಅತಿ ಚಿಕ್ಕದಾದ ಜೀವಿಗಳು ಉಸಿರಾಡಿದಾಗ ಆಮ್ಲಜನಕವನ್ನು ತೆಗೆದುಕೊಂಡು ಇಂಗಾಲದ ಡೈಆಕ್ಸೈಡನ್ನು ಹೊರಬಿಟ್ಟು ತನ್ಮೂಲಕ ಶಕ್ತಿಯನ್ನು ಪಡೆಯುತ್ತವೆ. ಅವುಗಳ ಬೆಳವಣಿಗೆಗೂ ಈ ಕ್ರಿಯೆ ಬೇಕು. ಎಲ್ಲಾ ಸಸ್ಯಗಳಿಗೂ ಸಾರಜನಕ ಜೀವನದುದ್ದಕ್ಕೂ ಬೇಕು. ಸಾರಜನಕವು ಮಣ್ಣು, ಗಾಳಿ, ಸಸ್ಯ ಮತ್ತೆ ಮಣ್ಣು ಎಂದು ಚಕ್ರದಂತೆ ಇಲ್ಲಿಂದಲ್ಲಿಗೆ ತಿರುಗುತ್ತಿರುತ್ತದೆ. ಜೀವಿಗಳು ಸತ್ತಾಗ ಅವುಗಳ ದೇಹದಿಂದ ಸಾರಜನಕವು ಮಣ್ಣಿಗೆ ಬಿಡುಗಡೆ ಆಗುತ್ತದೆ. (೩ನೇ ಚಿತ್ರ) ಮಣ್ಣು ತೊಳೆದುಹೋಯಿತೆಂದರೆ ಅದರೊಳಗಿನ ಸಾರಜನಕವು ನಾಶವಾಗುತ್ತದೆ. ಅಥವಾ ಮಣ್ಣಿನೊಳಗಿನ ಬ್ಯಾಕ್ಟೀರಿಯಾಗಳು ಸಾರಜನಕವನ್ನು ಸಾರಜನಕದ ಡೈಆಕ್ಸೈಡ್ ಮಾಡಿ ಗಾಳಿಗೆ ಬಿಡುಗಡೆ ಮಾಡಿದಾಗಲೂ ಮಣ್ಣಿನಿಂದ ಸಾರಜನಕ ಹೊರಹೋಗುತ್ತದೆ.

ನೈಸರ್ಗಿಕ ಹುಲ್ಲುಗಾವಲುಗಳಲ್ಲಿ ಹೆಚ್ಚುವ ಮಣ್ಣಿನ ಉಸಿರಾಟ

ಎರೆಹುಳುಗಳು ಸಾಕಷ್ಟು ಇರುವಂಥ ಹುಲ್ಲುಗಾವಲುಗಳಲ್ಲಿ ಮಣ್ಣಿನೊಳಗಿನ ಜೀವಿಗಳ ಉಸಿರಾಟ ಚೆನ್ನಾಗಿರುತ್ತದೆ ಎನ್ನುವುದನ್ನು ವಿಜ್ಞಾನಿಗಳು ಕಂಡುಕೊಂಡರು. ಎರೆಹುಳುಗಳು ಮಣ್ಣಿನೊಳಗೆ ಸತತವಾಗಿ ಹರಿದಾಡುತ್ತ ಮಣ್ಣನ್ನು ಕಲಸುತ್ತಿರುತ್ತವೆ. ಆಗ ಮಣ್ಣಿನೊಳಗಿನ ಜೀವಿಗಳು ಹೆಚ್ಚು ಉತ್ತೇಜಿತಗೊಂಡು ಅವುಗಳ ಚಟುವಟಿಕೆ ಮತ್ತು ಉಸಿರಾಟ ಹೆಚ್ಚುತ್ತದೆ. ತಿನ್ನಲು ಸಾಕಷ್ಟು ಪ್ರಮಾಣದಲ್ಲಿ ಸಾವಯವ ವಸ್ತು ಸಿಗುತ್ತಿದ್ದರೆ ಅವುಗಳ ಸಂಖ್ಯೆಯೂ ದ್ವಿಗುಣವಾಗುತ್ತ ಹೋಗುತ್ತದೆ. ನೈಸರ್ಗಿಕ ಹುಲ್ಲುಗಾವಲುಗಳಲ್ಲಿ ಸಾವಯವ ವಸ್ತು ಉಳುಮೆ ಮಾಡಿದ ಜಾಗಕ್ಕಿಂತ ಹೆಚ್ಚಾಗಿರುವುದರಿಂದ ಅಲ್ಲಿನ ಮಣ್ಣಿನಲ್ಲಿ ಜೀವಿಗಳೂ ಹೆಚ್ಚು ಇರುತ್ತವೆ.

ಹೆಚ್ಚು ಉಳುಮೆ ಮಾಡಿದ ಭೂಮಿಯಲ್ಲಿ ಹೆಚ್ಚೆಚ್ಚು ಸಾರಜನಕದ ಒಳ-ಹೊರ ಸಂಚಾರ

ಬ್ಯಾಕ್ಟೀರಿಯಾ ಚಟುವಟಿಕೆ ಹೆಚ್ಚಿರುವಲ್ಲೆಲ್ಲ ಮಣ್ಣಿನೊಳಗಿನ ಆಹಾರ ಚಕ್ರದಲ್ಲಿ ಸಾರಜನಕವು ಹೆಚ್ಚಾಗಿ ಲವಣೀಕೃತಗೊಳ್ಳುತ್ತಿರುತ್ತದೆ. ಉಳುಮೆ ಹೆಚ್ಚು ಮಾಡಿದಂತೆ ಬ್ಯಾಕ್ಟೀರಿಯಾ ಹೆಚ್ಚೆಚ್ಚು ಹುಟ್ಟಿ ಸಾಯುತ್ತಿರುತ್ತವೆ. ಸತ್ತ ಬ್ಯಾಕ್ಟೀರಿಯಾದ ಅಂಗಾಂಶಗಳಿಂದ ಮಣ್ಣಿನಲ್ಲಿ ಸಾರಜನಕವು ಹೆಚ್ಚೆಚ್ಚು ಸೇರುತ್ತಿರುತ್ತದೆ. ಅಲ್ಲಿಂದ ಸಾರಜನಕವು ಎಲ್ಲಿ ಹೋಗುತ್ತದೆ ಎನ್ನುವುದನ್ನು ವಿಜ್ಞಾನಿಗಳು ಅಭ್ಯಾಸ ಮಾಡಿದಾಗ ಕಡಿಮೆ ಉಳುಮೆಗೊಂಡ ಮಣ್ಣಿನಲ್ಲಿ ಸಾರಜನಕವು ಲವಣೀಕೃತಗೊಳ್ಳುತ್ತದೆ, ಅರ್ಬ್ಯುಸ್ಕ್ಯುಲರ್ ಮೈಕೊರೈಝಲ್ ಬೂಸ್ಟು ಆ ಮಣ್ಣಿನಲ್ಲಿ ಇದ್ದರೆ ಅಲ್ಲಿ ಸಾರಜನಕವು ಮಳೆ ಬಂದಾಗ ತೊಳೆದುಕೊಂಡು ಹೋಗದೇ ಸಸ್ಯಗಳಿಗೆ ಬಳಸಿಕೊಳ್ಳಲು ಸಿಗುತ್ತದೆ. ಈ ಜಾತಿಯ ಬೂಸ್ಟು ಸಸ್ಯಗಳ ಬೇರಿಗೆ ಅಂಟಿಕೊಂಡಿದ್ದು ಬೇರೆ ಪೋಷಕಾಂಶಗಳೊಂದಿಗೆ ಸಾರಜನಕವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತವೆ. ಹೀಗೆ ಆ ಬೂಸ್ಟು ಮಣ್ಣಿನಲ್ಲಿ ಇದೆಯೆಂದರೆ ಸಾರಜನಕವು ಸಸ್ಯಗಳಿಗೆ ಸಿಗುತ್ತಿದೆ ಎಂದು ತಿಳಿದುಕೊಳ್ಳಬಹುದು.

ಎಷ್ಟು ಸಾರಜನಕದ ನಷ್ಟವಾಗುತ್ತಿದೆ ಎಂದು ನೋಡಲು ವಿಜ್ಞಾನಿಗಳು ಮಣ್ಣಿನಲ್ಲಿ ನೈಟ್ರಸ್ ಆಕ್ಸೈಡ್ ಎಷ್ಟಿದೆ ಅಳತೆ ಮಾಡಿದರು. ಅದನ್ನು ಪರೀಕ್ಷೆ ಮಾಡಲು ಮಣ್ಣಿನಲ್ಲಿ ಫ್ಲಾಜೆಲ್ಲೆಗಳು-ಅಂದರೆ ನೀರಿನಲ್ಲಿ ಬಾಲವನ್ನು ಅಲ್ಲಾಡಿಸುತ್ತಾ ಮುಂದಕ್ಕೆ ಹೋಗುವ ಜಾತಿಯ ಜೀವಿಗಳು ಮಣ್ಣಿನಲ್ಲಿ ಎಷ್ಟಿವೆ ಎಂದು ಪರೀಕ್ಷಿಸಿದರು. ಒಂದು ಜಾತಿಯ ಬ್ಯಾಕ್ಟೀರಿಯಾಗಳು ಸಾರಜನಕದ ನಷ್ಟಕ್ಕೆ ಕಾರಣ. ಈ ಬ್ಯಾಕ್ಟೀರಿಯಾಗಳನ್ನು ಫ್ಲಾಜೆಲ್ಲೆಗಳು ತಿಂದುಹಾಕುತ್ತವೆ. ಸಾರಜನಕವನ್ನು ಕಡಿಮೆ ಮಾಡುವ ಬ್ಯಾಕ್ಟೀರಿಯಾಗಳು ಕಡಿಮೆ ಇದ್ದಲ್ಲಿ ಈ ಫ್ಲಾಜೆಲ್ಲೆಗಳು ಹೆಚ್ಚಿಗೆ ಇರುತ್ತವೆ. ಅಂಥ ಮಣ್ಣಿನಲ್ಲಿ ಸಾರಜನಕವು ಕಡಿಮೆ ಆಗಿರುತ್ತದೆ ಎಂದು ತಿಳಿದುಕೊಳ್ಳಬಹುದು. ಮಣ್ಣಿನ ಆಹಾರ ಚಕ್ರದಲ್ಲಿ ಸಾರಜನಕವು ಇದೆಯೋ ಇಲ್ಲವೋ ತಿಳಿದುಕೊಳ್ಳುವುದು ಮುಖ್ಯ ಯಾಕೆಂದರೆ ಮಣ್ಣಿನಲ್ಲಿಯ ಸಾರಜನಕವು ಸಾರಜನಕದ ಆಕ್ಸೈಡ್ ಆಗಿ ಗಾಳಿಯಲ್ಲಿ ಸೇರಿತೆಂದರೆ ವಾತಾವರಣದ ಬದಲಾವಣೆಯು ಇನ್ನೂ ಕೆಟ್ಟದಾಗಬಲ್ಲದು. ನೈಟ್ರಸ್ ಆಕ್ಸೈಡ್ ಅನಿಲವು ಇಂಗಾಲದ ಡೈ ಆಕ್ಸೈಡಿಗಿಂತಲೂ ೩೧೪ ಪಟ್ಟು ಹೆಚ್ಚು ವಿನಾಶಕಾರಿ.

ಮಣ್ಣಿನ ಜೀವ ವೈವಿಧ್ಯವನ್ನು ಹೆಚ್ಚಿಸಿ, ರಾಸಾಯನಿಕಗಳ ಒಳಸುರಿಗಳ ದುಷ್ಪರಿಣಾಮ ತಡೆಯಿರಿ

ನಮಗೆ ಹೆಚ್ಚೆಚ್ಚು ತರಕಾರಿಗಳು ಬೇಕು, ಹೆಚ್ಚೆಚ್ಚು ಬೆಳೆಗಳು ಬೇಕು. ಹೆಚ್ಚು ಬೆಳೆ ತೆಗೆಯಬೇಕೆಂದರೆ ಹಾಗಾದರೆ ಸರಿಯಾದ ಮಾರ್ಗ ಯಾವುದು? ಈ ಪ್ರಶ್ನೆ ಯಾವಾಗಲೂ ಸಮಾಜದಲ್ಲಿ ಚರ್ಚೆಗೊಳಪಡುತ್ತಲೇ ಇದೆ. ಭೂಮಿಯ ಮೇಲೆ ಶತಕೋಟಿಗಟ್ಟಲೆ ಮನುಷ್ಯರು ತುಂಬಿಬಿಟ್ಟಿದ್ದಾರೆ. ಅವರೆಲ್ಲರ ಹೊಟ್ಟೆ ತುಂಬಿಸಬೇಕು. ಭೂಮಿಯ ಮಣ್ಣಿನಲ್ಲಿರುವ ಕೋಟ್ಯಂತರ ಜೀವಿಗಳ ನಾಶವೂ ಆಗಬಾರದು. ಇದನ್ನು ಸಾಧಿಸುವುದು ಹೇಗೆ? ಮಣ್ಣಿಗೆ ಹೊಸತೇನಾದರೂ ಸೇರಿಸಿದಾಗ ಮಣ್ಣಿನೊಳಗಿನ ರಚನೆಯು ಬದಲಾಗುತ್ತದೆ, ಅದರೊಳಗಿನ ಜೀವಿಗಳ ಮೇಲದು ಪರಿಣಾಮ ಬೀರಲೂಬಹುದು.ರೈತರು ರಾಸಾಯನಿಕಗಳನ್ನು ಮಣ್ಣಿಗೆ ಸೇರಿಸಿದಾಗ ಅದು ಒಂದೊಂದು ಜಾತಿಯ ಜೀವಿಗಳಿಗೆ ಪ್ರಭಾವ ಬೀರುವುದಷ್ಟೇ ಅಲ್ಲ, ಮಣ್ಣು ಜೀವಿಗಳ ನಡುವಿನ ಸಂಪರ್ಕಜಾಲದ ಮೇಲೂ ಪರಿಣಾಮ ಬೀರುತ್ತದೆ. ಸಂಪರ್ಕ ಕೊಂಡಿಗಳ ಮೇಲೆ ಪ್ರಭಾವ ಬಿದ್ದಾಗ ಒಂದೊಂದು ಜೀವಿ ಪರಿಸರದ ಶಕ್ತಿ ಸಂಚಯದ ಮೇಲೂ ಪ್ರಭಾವ ಬೀರುತ್ತದೆ. ಕೆಲವು ಪೋಷಕಾಂಶಗಳು ಉಳಿದುಕೊಳ್ಳಬಹುದು, ಕೆಲವು ನಾಶವಾಗಬಹುದು. ಆಗ ರೈತರು ಇನ್ನೂ ಹೆಚ್ಚೆಚ್ಚು ರಾಸಾಯನಿಕಗಳ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಕಡಿಮೆ ಭೂಮಿಯಲ್ಲಿ ಹೆಚ್ಚು ಬೆಳೆ ತೆಗೆಯಬೇಕೆಂದು ಹೆಚ್ಚೆಚ್ಚು ರಾಸಾಯನಿಕಗಳನ್ನು ಬಳಸಿದಾಗ ಮಣ್ಣಿನೊಳಗಿನ ಜೀವ ವೈವಿಧ್ಯತೆ ಕಡಿಮೆಯಾಗಿ ಅದರ ಪರಿಣಾಮವಾಗಿ ಮಣ್ಣಿನಲ್ಲಿ ಬಹಳಷ್ಟು ಪೋಷಕಾಂಶಗಳು ಮತ್ತು ಇಂಗಾಲದ ಕೊರತೆಯುಂಟಾಗುತ್ತದೆ. ಆದರೆ ಮಣ್ಣಿಗೆ ರಾಸಾಯನಿಕಗಳ ಒಳಸುರಿ ಕಡಿಮೆ ಇದ್ದಾಗ ಬೆಳೆ ಕಡಿಮೆ ಬರಬಹುದು, ಆದರೆ ಮಣ್ಣಿನ ಜೀವಿ ಪರಿಸರ ಉಳಿದುಕೊಳ್ಳುತ್ತದೆ. ಕಾರಣ, ಹೆಚ್ಚು ಒಳಸುರಿ ಹಾಕಿ ಬೆಳೆ ತೆಗೆಯುವ ಭೂಮಿಯ ಪುನಶ್ಚೇತನ ಕ್ರಮಗಳನ್ನು ಕೈಗೆತ್ತಿಕೊಂಡು ಮಣ್ಣಿನಲ್ಲಿರುವ ಜೀವವೈವಿಧ್ಯತೆಯನ್ನು ಹೆಚ್ಚಿಸಿಕೊಳ್ಳಬೇಕು. ಆಗ ರಾಸಾಯನಿಕಗಳ ಮೇಲೆ ಅವಲಂಬನೆ ಕಡಿಮೆಯಾಗುತ್ತದೆ. ಮಣ್ಣಿನ ಆರೋಗ್ಯವೂ, ಮನುಷ್ಯರ ಆರೋಗ್ಯವೂ ಉತ್ತಮಗೊಳ್ಳುತ್ತದೆ. ನಾವು ನಮಗೆ ಬೇಕಾಗುವ ತರಕಾರಿಗಳನ್ನು ಮನೆಯಂಗಳದಲ್ಲಿಯೇ ಬೆಳೆದುಕೊಳ್ಳಲು ಸಾಧ್ಯವಾದರೆ, -ನಾವಂತೂ ರಾಸಾಯನಿಕ ಹಾಕಿ ಬೆಳೆಯುವುದಿಲ್ಲ, -ಅಷ್ಟರಮಟ್ಟಿಗೆ ಹೆಚ್ಚು ಬೆಳೆಯಬೇಕಾದ ಬೇಡಿಕೆಯ ಮೇಲೆ ಭಾರ ಕಡಿಮೆಯಾಗುತ್ತದೆ. ನಿಮಗೆ ಸ್ವತಃ ಬೆಳೆದುಕೊಳ್ಳಲು ಸಾಧ್ಯವಿಲ್ಲವೆಂದಾದರೆ ರಾಸಾಯನಿಕ ಹಾಕದೇ ಬೆಳೆದುದನ್ನೇ ಖರೀದಿಸಿ. ಹೀಗೆ ಸ್ವಲ್ಲ ಸ್ವಲ್ಪವಾಗಿಯೇ ನಮ್ಮ ಪರಿಸರದ ಆರೋಗ್ಯಕ್ಕೆ ನಾವು ಕೊಡುಗೆಯನ್ನು ಕೊಡುತ್ತ ಹೋಗಬಹುದು

ಶಬ್ದಕೋಶ

ಮಣ್ಣಿನೊಳಗಿನ ಜೀವಾಣುಗಳು

ನೆಲದೊಳಗೆ ಇರುವ ಎಲ್ಲಾ ರೀತಿಯ ಜೀವಿಗಳು ಏಕಾಣು ಜೀವಿ ಬ್ಯಾಕ್ಟೀರಿಯಾದಿಂದ ಹಿಡಿದು ಬಹುಅಣು ಜೀವಿಗಳಾದ ಎರೆಹುಳು, ಪ್ರೋಟೋಝುವಾ, ಮೃದ್ವಂಗಿಗಳು ಮತ್ತು ಗೆದ್ದಲುಗಳು ಎಲ್ಲವೂ ಇದರಲ್ಲಿ ಬರುತ್ತವೆ.

ಪರಿಸರ ಸೇವೆಗಳು

ಜನರಿಗೆ ಪರಿಸರದಿಂದಾಗುವ ಹಿತ. ಮಣ್ಣಿನೊಳಗಿನ ಪರಿಸರದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವುದಿರಬಹುದು, ನೀರನ್ನು ಹೊರಹಾಕುವುದಿರಬಹುದು, ಪೋಷಕಾಂಶಗಳನ್ನು ಮಿಶ್ರ ಮಾಡುವುದಿರಬಹುದು- ಇದರಿಂದ ಪೋಷಕಾಂಶಗಳ ಮರುನವೀಕರಣ ಆಗುತ್ತಿರುತ್ತದೆ**.**

ಉಳುಮೆ

ಕೃಷಿಗಾಗಿ ಭೂಮಿಯನ್ನು ಅಗೆದು ಹದ ಮಾಡುವುದು ಉಳುಮೆಮಾಡಿದಾಗ ಕಳೆಗಳು ಮಣ್ಣಿನೊಳಗೆ ಮಿಶ್ರವಾಗಿ ಬೆಳೆಗಳ ಬೇರುಗಳು ಭೂಮಿಯೊಳಗೆ ಸುಲಭವಾಗಿ ಇಳಿಯಲು ಸಾಹಾಯವಾಗುತ್ತದೆ.

ಮಣ್ಣಿನೊಳಗಿನ ಆಹಾರ ಚಕ್ರ

ಮಣ್ಣಿನೊಳಗಿರುವ ಜೀವಿಗಳು ಪರಸ್ಪರ ಆಹಾರವನ್ನು ಒದಗಿಸುವ ಕ್ರಿಯೆ. ಈ ಕ್ರಿಯೆಯು ಬೇರುಗಳು, ಬೂಸ್ಟು, ಬ್ಯಾಕ್ಟೀರಿಯಾ ಗಳಿಂದ ಶುರುವಾಗಿ ಶಕ್ತಿ ಸಂಚಯನಕ್ಕೆ ದಾರಿಮಾಡಿಕೊಡುತ್ತದೆ.

ಭೂ ಬಳಕೆ

ನೈಸರ್ಗಿಕವಾದ ಪರಿಸರವನ್ನು ಯಾವ ರೀತಿಯಾಗಿ ಬದಲಾಯಿಸಲಾಗುತ್ತದೆ ಮತ್ತು ನಿಭಾಯಿಸಲಾಗುತ್ತದೆ. ಇಲ್ಲಿ ಅತಿಯಾದ ಒಳಸುರಿಗಳ ಭೂಬಳಕೆ, ಮಿತವಾದ ಒಳಸುರಿಗಳ ಭೂಬಳಕೆ ಮತ್ತು ಅತಿ ಕಡಿಮೆ ಒಳಸುರಿಗಳ ಭೂಬಳಕೆಗಳ ಬಗ್ಗೆ ಉದಾಹರಿಸಲಾಗಿದೆ.

ORIGINAL ARTICLE

de Vries, F. T., Thébault, E., Liiri, M., Birkhofer, K., Tsiafouli, M. A., Bjørnlund, L., et al. 2013. Soil food web properties explain ecosystem services across European land use systems. Proc. Natl. Acad. Sci. U.S.A. 110:14296–301.

TRANSLATOR

SHARADA GOPAL

FUNDING (TRANSLATION)

The team Translating Soil Biodiversity acknowledges support of the German Centre for integrative Biodiversity Research (iDiv) Halle-Jena-Leipzig funded by the German Research Foundation (DFG FZT 118, 202548816).


ಚಿತ್ರ 3 : ಸಾರಜನಕವು ಮಣ್ಣಿನ ಆಹಾರ ಚಕ್ರದಲ್ಲಿ ಬದಲಾವಣೆಗೊಂಡು ಗಿಡಗಳು, ನೀರು ಮತ್ತು ವಾಯುವಿನ ಮೂಲಕ ಸಂಚಲಿಸುತ್?? ಚಿತ್ರ 2 : ನೈಸರ್ಗಿಕ ಭೂಮಿಯನ್ನು ಮನುಷ್ಯರು ಬಳಸುವ ಮೂರು ವಿಧಾನಗಳು ುಳುಮೆ ಮಾಡದ ನೈಸರ್ಗಿಕ ಬೆಳೆ ಪದ್ಧತಿಯಲ್ಲಿ ಹೆಚ್ಚು ಉಳುಮೆ ಮಾಡಲಾಗುವುದಿಲ್ಲ. ಅಲ್ಲಿ ವಿಶೇಷ ಕೊಯ್ಲು ಕೂಡ ಇರುವುದಿಲ್ಲ. ಇಂಥಲ್ಲಿ ಪರಿಸರದ ಕೊಡುಗೆಗಳು ವೈವಿಧ್ಯಮಯವಾಗಿರುತ್ತವೆ. ನಿಯಂತ್ರಿತ ರಾಸಾಯನಿಕ ಬಳಕೆಯಲ್ಲಿ ಉಳುಮೆ ಕಡಿಮೆ, ಒಳಸುರಿ ಕಡಿಮೆ ಮತ್ತು ಸಣ್ಣ ಸಾಧನಗಳಿಂದ ಕೊಯ್ಲು ಆಗುತ್ತದೆ. ಅತಿ ಹೆಚ್ಚೇನೂ ಬೆಳೆ ಸಿಗುವುದಿಲ್ಲ. ಅತಿ ಹೆಚ್ಚು ಭೂಬಳಕೆ ವಿಧಾನದಲ್ಲಿ ರಾಸಾಯನಿಕ ಒಳಸುರಿಗಳೂ ಬಹಳ, ಕೊಯ್ಲಿಗೆಎ ದೊಡ್ಡ ಮಶೀನುಗಳನ್ನು ಬಳಸಲಾಗುತ್ತದೆ, ಕಡಿಮೆ ಜಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಸಿಗುತ್ತದೆ. ಹೆಚ್ಚು ಬೆಳೆಯಬೇಕೆಂಬ ಹಂಬಲದಲ್ಲಿ ಪರಿಸರಕ್ಕೆ ಒಂದಷ್ಟು ಧಕ್ಕೆ ಮಾಡಲಾಗುತ್ತದೆ.

ಚಿತ್ರ 2 : ನೈಸರ್ಗಿಕ ಭೂಮಿಯನ್ನು ಮನುಷ್ಯರು ಬಳಸುವ ಮೂರು ವಿಧಾನಗಳು ುಳುಮೆ ಮಾಡದ ನೈಸರ್ಗಿಕ ಬೆಳೆ ಪದ್ಧತಿಯಲ್ಲಿ ?

ಚಿತ್ರ 1 : ಮಣ್ಣಿನೊಳಗಿನ ಆಹಾರ ಚಕ್ರ: ಮಣ್ಣಿನೊಳಗಿರುವ ಜೀವಿಗಳು ೧. ಬ್ಯಾಕ್ಟೀರಿಯಾ ೨. ಬೂಸ್ಟು, ೩. ಅರಬುಸ್ಕ್ಯುಲರ್? ಚಿತ್ರ 1 : ಮಣ್ಣಿನೊಳಗಿನ ಆಹಾರ ಚಕ್ರ: ಮಣ್ಣಿನೊಳಗಿರುವ ಜೀವಿಗಳು ೧. ಬ್ಯಾಕ್ಟೀರಿಯಾ ೨. ಬೂಸ್ಟು, ೩. ಅರಬುಸ್ಕ್ಯುಲರ್‌ ಮೈಕೋರೈಞಲ್‌ ಬೂಸ್ಟ್‌ (4) ಏಕಾಣುಜೀವಿ (5) ಬ್ಯಾಕ್ಟೀರಿಯಾಗಳನ್ನು ತಿನ್ನುವ ದುಂಡುಹುಳುಗಳು (6)ಬೂಸ್ಟುಗಳನ್ನು ತಿನ್ನುವ ದುಂಡುಹುಳಗಳು (7)ಬೇರನ್ನು ತಿನ್ನುವ ದುಂಡುಹುಳುಗಳು (8) ಕೊಲೆಂಬಲಾನ್‌ ಗಳು (9)ಹೊಂಚಿ ತಿನ್ನುವ ದುಂಡುಹುಳಗಳು (10) ಹೊಂಚಿ ತಿನ್ನುವ ಗೆದ್ದಲು ಬಾಣದ ಗುರುತುಗಳಿವೆಯಲ್ಲವೇ? ಬಾಣದ ಬುಡವು ಆಹಾರವಾಗುವ ಜೀವಾಣುಗಳಾದರೆ, ಬಾಣದ ತುದಿಯು ತಿನ್ನುವ ಸೂಕ್ಷ್ಮ ಜೀವಿಗಳು. ಸಂವಹನ ದಾರಿಗಳೂ ಇವೆ. ಇವು ಮೂರು ಮುಖ್ಯ ಶಕ್ತಿ ಸಂಚಯನಗಳು: ಒಂದು ಬ್ಯಾಕ್ಟೀರಿಯಾ ಆಧರಿತ ಮಾರ್ಗ (ಕೇಸರಿ ಬಾಣ), ಎರಡನೆಯದು ಬೂಸ್ಟು ಆಧರಿತ ಮಾರ್ಗ (ಹಳದಿ ಬಾಣಗಳು) ಮೂರನೆಯದು ಬೇರು ಆಧರಿತ ಮಾರ್ಗ (ಹಸಿರು ಬಾಣಗಳು). ಭೂತಗನ್ನಡಿಯು ಪ್ರತಿಯೊಂದು ಜೀವಿ ಉಸಿರಾಡಿದಾಗ ಮತ್ತು ಆಹಾರ ಸೇವಿಸಿದಾಗ ಪೋಷಕಾಂಶಗಳು ಮತ್ತು ಶಕ್ತಿಯು ಅದರ ಮೂಲಕ ಹಾದುಹೋಗುವುದನ್ನು ತೋರಿಸುತ್ತದೆ.

Frontiers for Young Minds

Originally published on Frontiers for Young Minds